ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ 15,000 ಶಿಕ್ಷಕರ ನೇಮಕಾತಿ
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿವಿಧ ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ವಿಶೇಷ ಕರಡು ನಿಯಮಗಳನ್ನು ಪ್ರಕಟಿಸಿದೆ. ಈ ಕರಡು ನಿಯಮಗಳ ಅನುಸೂಚಿಯಲ್ಲಿ ಒಟ್ಟು 15,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ.
ಕರ್ನಾಟಕ ಶಿಕ್ಷಕರ ನೇಮಕಾತಿ 2026 ಹುದ್ದೆಗಳ ವಿವರ
ಅಧಿಕೃತ ಕರಡು ವಿಶೇಷ ನಿಯಮಗಳ ಅನುಸೂಚಿ–Iರಲ್ಲಿ ಪ್ರಾಥಮಿಕ, ಪದವೀಧರ ಪ್ರಾಥಮಿಕ, ಪ್ರೌಢ ಶಾಲೆ, ಗಣಕ ವಿಜ್ಞಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಒಟ್ಟು 15,000 ಹುದ್ದೆಗಳ ವೃಂದವಾರು ಹಂಚಿಕೆ ಹಾಗೂ ವೇತನ ಶ್ರೇಣಿಯನ್ನು ಪ್ರಕಟಿಸಲಾಗಿದೆ.
ಹುದ್ದೆವಾರು ಸಂಖ್ಯೆ ಮತ್ತು ವೇತನ ಶ್ರೇಣಿ
| ಕ್ರ.ಸಂ. | ಹುದ್ದೆಯ ಹೆಸರು | ಕಲ್ಯಾಣ ಕರ್ನಾಟಕ | ಕಲ್ಯಾಣ ಕರ್ನಾಟಕೇತರ | ಒಟ್ಟು ಹುದ್ದೆಗಳು | ವೇತನ ಶ್ರೇಣಿ |
|---|---|---|---|---|---|
| 1 | ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 5ನೇ ತರಗತಿ | 800 | 100 | 900 | ₹41,300 – ₹81,800 |
| 2 | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6ರಿಂದ 8ನೇ ತರಗತಿ | 3,228 | 5,272 | 8,500 | ₹44,425 – ₹83,700 |
| 3 | ಗಣಕ ವಿಜ್ಞಾನ ಶಿಕ್ಷಕರು 1ರಿಂದ 8ನೇ ತರಗತಿ | 300 | 200 | 500 | ₹44,425 – ₹83,700 |
| 4 | ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-II 1ರಿಂದ 8ನೇ ತರಗತಿ | 106 | 44 | 150 | ₹41,300 – ₹81,800 |
| 5 | ಪ್ರೌಢ ಶಾಲಾ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಮತ್ತು ಸಂಬಂಧಿತ ಶಾಲೆಗಳು | 2,214 | 2,286 | 4,500 | ₹54,175 – ₹99,400 |
| 6 | ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-I ಸರ್ಕಾರಿ ಪ್ರೌಢ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು | 319 | 131 | 450 | ₹54,175 – ₹99,400 |
| ಒಟ್ಟು ಹುದ್ದೆಗಳು | 6,967 | 8,033 | 15,000 | — | |
1ರಿಂದ 5ನೇ ತರಗತಿ
6ರಿಂದ 8ನೇ ತರಗತಿ
1ರಿಂದ 8ನೇ ತರಗತಿ
1ರಿಂದ 8ನೇ ತರಗತಿ
ಶೈಕ್ಷಣಿಕ ಅರ್ಹತೆ, TET ಅರ್ಹತೆ ಮತ್ತು ವಯೋಮಿತಿ
ಶಿಕ್ಷಕರ ಹುದ್ದೆಗೆ ಅನುಗುಣವಾಗಿ PUC, ಪದವಿ, D.El.Ed., B.El.Ed., B.Ed., B.P.Ed. ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯ ಷರತ್ತುಗಳು ಬದಲಾಗುತ್ತವೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಹುದ್ದೆಗೆ ನಿಗದಿಪಡಿಸಿರುವ ವಿಷಯವಾರು ಅರ್ಹತೆಯನ್ನು ಪರಿಶೀಲಿಸಬೇಕು.
ಪ್ರಮುಖ ವಿದ್ಯಾರ್ಹತೆಗಳು
ಹುದ್ದೆವಾರು ಶೈಕ್ಷಣಿಕ ಅರ್ಹತೆ
ಪ್ರಾಥಮಿಕ ಶಾಲಾ ಶಿಕ್ಷಕರು
1ರಿಂದ 5ನೇ ತರಗತಿ- ಕನಿಷ್ಠ ಶೇ.50 ಅಂಕಗಳೊಂದಿಗೆ PUC ಮತ್ತು ಎರಡು ವರ್ಷದ D.El.Ed.
- PUC ಶೇ.50 ಅಂಕಗಳು ಮತ್ತು ನಾಲ್ಕು ವರ್ಷದ B.El.Ed.
- PUC ಶೇ.50 ಅಂಕಗಳು ಮತ್ತು ಎರಡು ವರ್ಷದ ವಿಶೇಷ ಶಿಕ್ಷಣ ಡಿಪ್ಲೊಮಾ
- ಶಿಕ್ಷಕರ ತರಬೇತಿ ಕೋರ್ಸ್ NCTE ಅಥವಾ ಸಂಬಂಧಿತ ಅಧಿಕೃತ ಸಂಸ್ಥೆಯಿಂದ ಮಾನ್ಯತೆ ಪಡೆದಿರಬೇಕು.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು
6ರಿಂದ 8ನೇ ತರಗತಿ- ಕನಿಷ್ಠ ಶೇ.50 ಅಂಕಗಳ ಪದವಿ ಮತ್ತು ಎರಡು ವರ್ಷದ D.El.Ed.
- ಶೇ.50 ಅಂಕಗಳ ಪದವಿ ಮತ್ತು B.Ed. ಅಥವಾ B.Ed. ವಿಶೇಷ ಶಿಕ್ಷಣ
- PUC ಶೇ.50 ಅಂಕಗಳು ಮತ್ತು ನಾಲ್ಕು ವರ್ಷದ B.El.Ed. ಅಥವಾ ಶಿಕ್ಷಕರ ಶಿಕ್ಷಣ ಪದವಿ
- ಭಾಷೆ, ಸಮಾಜ ವಿಜ್ಞಾನ, ಗಣಿತ–ವಿಜ್ಞಾನ ಅಥವಾ ಜೈವಿಕ ವಿಜ್ಞಾನ ಹುದ್ದೆಗೆ ಸಂಬಂಧಿತ ವಿಷಯಗಳನ್ನು ಪದವಿಯಲ್ಲಿ ಅಧ್ಯಯನ ಮಾಡಿರಬೇಕು.
ಗಣಕ ವಿಜ್ಞಾನ ಶಿಕ್ಷಕರು
1ರಿಂದ 8ನೇ ತರಗತಿ- ಕನಿಷ್ಠ ಶೇ.50 ಅಂಕಗಳೊಂದಿಗೆ B.Sc. Computer Science
- BCA, BIT ಅಥವಾ B.Sc. Computer Applications
- BE/B.Tech in Computer Science ಅಥವಾ Information Science
- SSLCಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿರಬೇಕು.
- ನೇಮಕಾತಿಯ ನಂತರ ನಿಗದಿತ ಅವಧಿಯೊಳಗೆ B.Ed. ಮತ್ತು TET ಅರ್ಹತೆ ಪಡೆಯಬೇಕಾಗುತ್ತದೆ.
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-II
1ರಿಂದ 8ನೇ ತರಗತಿ- ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ PUC ಅಥವಾ ತತ್ಸಮಾನ
- ಅನ್ವಯವಾಗುವ NCTE ನಿಯಮಗಳ ಪ್ರಕಾರ ಕ್ರೀಡೆ ಅಥವಾ ಆಟಗಳಲ್ಲಿ ಶಾಲೆ, ಕಾಲೇಜು ಅಥವಾ ಜಿಲ್ಲಾ ಮಟ್ಟದ ಭಾಗವಹಿಸುವಿಕೆ.
- ಕನಿಷ್ಠ ಎರಡು ವರ್ಷದ ದೈಹಿಕ ಶಿಕ್ಷಣ ಪ್ರಮಾಣಪತ್ರ ಅಥವಾ ಡಿಪ್ಲೊಮಾ ಅಥವಾ ತತ್ಸಮಾನ ಅರ್ಹತೆ.
- ದೈಹಿಕ ಶಿಕ್ಷಣ ಕೋರ್ಸ್ NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.
ಪ್ರೌಢ ಶಾಲಾ ಸಹ ಶಿಕ್ಷಕರು
ಸರ್ಕಾರಿ ಪ್ರೌಢ ಶಾಲೆಗಳು- ಅರ್ಜಿ ಸಲ್ಲಿಸುವ ವಿಷಯಕ್ಕೆ ಸಂಬಂಧಿಸಿದ BA, B.Sc. ಅಥವಾ ತತ್ಸಮಾನ ಪದವಿ
- B.Ed. ಅಥವಾ B.Ed. ವಿಶೇಷ ಶಿಕ್ಷಣ ವಿದ್ಯಾರ್ಹತೆ ಹೊಂದಿರಬೇಕು.
- ಸಂಬಂಧಿತ ವಿಷಯವನ್ನು B.Ed.ನಲ್ಲಿ ಬೋಧನಾ ವಿಧಾನ ಅಥವಾ Teaching Method ಆಗಿ ಅಧ್ಯಯನ ಮಾಡಿರಬೇಕು.
- ಕಲೆ, ಜೈವಿಕ ವಿಜ್ಞಾನ, ಗಣಿತ, ಭೌತ ವಿಜ್ಞಾನ ಮತ್ತು ಭಾಷಾ ಶಿಕ್ಷಕರಿಗೆ ಪ್ರತ್ಯೇಕ ವಿಷಯ ಸಂಯೋಜನೆ ಅನ್ವಯವಾಗುತ್ತದೆ.
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-I
ಪ್ರೌಢ ಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜು- ದೈಹಿಕ ಶಿಕ್ಷಣವನ್ನು ಐಚ್ಛಿಕ ವಿಷಯವಾಗಿ ಹೊಂದಿರುವ ಪದವಿ ಮತ್ತು ಕನಿಷ್ಠ ಶೇ.50 ಅಂಕಗಳು
- ಅಥವಾ ಅನ್ವಯವಾಗುವ ಕ್ರೀಡಾ ಭಾಗವಹಿಸುವಿಕೆಯ ಷರತ್ತಿನೊಂದಿಗೆ ದೈಹಿಕ ಶಿಕ್ಷಣ ವಿಷಯದ ಪದವಿ.
- B.P.Ed. ಅಥವಾ ತತ್ಸಮಾನ ದೈಹಿಕ ಶಿಕ್ಷಣ ಪದವಿ ಮಾನ್ಯ ಅರ್ಹತಾ ಮಾರ್ಗಗಳಲ್ಲಿ ಒಂದಾಗಿದೆ.
- NCTE ನಿಯಮಗಳಲ್ಲಿ ಉಲ್ಲೇಖಿಸಿರುವ ಇತರೆ ಸಮಾನ ದೈಹಿಕ ಶಿಕ್ಷಣ ಅರ್ಹತೆಗಳೂ ಅನ್ವಯವಾಗಬಹುದು.
ಭಾಷೆ, ಗಣಿತ ಮತ್ತು ವಿಜ್ಞಾನ ವಿಷಯದ ವಿಶೇಷ ಷರತ್ತುಗಳು
ಭಾಷಾ ಶಿಕ್ಷಕರು
1ರಿಂದ 5ನೇ ತರಗತಿಯ ಭಾಷಾ ಶಿಕ್ಷಕರ ಹುದ್ದೆಗೆ ಅಭ್ಯರ್ಥಿಯು PUCಯಲ್ಲಿ ಸಂಬಂಧಿತ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಪ್ರತ್ಯೇಕವಾಗಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು. ಶಿಕ್ಷಕರ ತರಬೇತಿಯಲ್ಲಿ ಸಂಬಂಧಿತ ಭಾಷೆಯ ಬೋಧನಾ ವಿಧಾನವನ್ನು ಅಧ್ಯಯನ ಮಾಡಿರಬೇಕು.
ಪ್ರಾಥಮಿಕ ಗಣಿತ ಮತ್ತು ವಿಜ್ಞಾನ
PUCಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಪ್ರತ್ಯೇಕವಾಗಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು. ಶಿಕ್ಷಕರ ತರಬೇತಿಯಲ್ಲಿ ಕನಿಷ್ಠ ಒಂದು ಸಂಬಂಧಿತ ವಿಷಯದ ಬೋಧನಾ ವಿಧಾನವನ್ನು ಅಧ್ಯಯನ ಮಾಡಿರಬೇಕು.
ಪದವೀಧರ ಭಾಷಾ ಶಿಕ್ಷಕರು
ಸಂಬಂಧಿತ ಭಾಷೆ ಮತ್ತು ಅಧಿಸೂಚನೆಯಲ್ಲಿ ಅನುಮತಿಸಿರುವ ಮತ್ತೊಂದು ವಿಷಯವನ್ನು ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿರಬೇಕು. ಸಂಬಂಧಿತ ಭಾಷೆಯಲ್ಲಿ Practice Teaching ಅಥವಾ Teaching Method ಪೂರ್ಣಗೊಳಿಸಿರಬೇಕು.
ಪದವೀಧರ ಗಣಿತ ಮತ್ತು ವಿಜ್ಞಾನ
ಪದವಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಕಡ್ಡಾಯವಾಗಿ ಹಾಗೂ ರಸಾಯನಶಾಸ್ತ್ರ, ಗಣಕ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಸಂಖ್ಯಾಶಾಸ್ತ್ರ, ಭೂಗೋಳ ಅಥವಾ ಗೃಹ ವಿಜ್ಞಾನದಲ್ಲಿ ಒಂದನ್ನು ಸಂಬಂಧಿತ ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿರಬೇಕು.
TET ಅರ್ಹತೆ ಯಾವ ಹುದ್ದೆಗೆ?
1ರಿಂದ 5ನೇ ತರಗತಿ
6ರಿಂದ 8ನೇ ತರಗತಿ
ಕರ್ನಾಟಕ ಶಿಕ್ಷಕರ ನೇಮಕಾತಿ ವಯೋಮಿತಿ
ಆಯ್ಕೆ ವಿಧಾನ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಅಂಕಗಳ ಲೆಕ್ಕಾಚಾರ
ಅಭ್ಯರ್ಥಿಗಳ ಆಯ್ಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ, ವಿದ್ಯಾರ್ಹತೆ ಮತ್ತು ಶಿಕ್ಷಕರ ತರಬೇತಿ ಕೋರ್ಸ್‌ನಲ್ಲಿ ಪಡೆದ ಅಂಕಗಳಿಗೆ ನಿಗದಿಪಡಿಸಿರುವ Weightage ಆಧಾರದಲ್ಲಿ ತಯಾರಿಸುವ ಮೆರಿಟ್ ಪಟ್ಟಿಯ ಮೂಲಕ ನಡೆಸಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯ ಪ್ರಮುಖ ಮಾಹಿತಿ
ಪ್ರಾಥಮಿಕ ಶಿಕ್ಷಕರ ಹುದ್ದೆಗಳ Weightage
ಗಣಕ ವಿಜ್ಞಾನ ಶಿಕ್ಷಕರು — 1ರಿಂದ 8ನೇ ತರಗತಿ
ಗಣಕ ವಿಜ್ಞಾನ ಶಿಕ್ಷಕರ ಮೆರಿಟ್ ಲೆಕ್ಕಾಚಾರದಲ್ಲಿ CET ಅಂಕಗಳಿಗೆ ಶೇ.70 ಮತ್ತು ನಿಗದಿಪಡಿಸಿದ ಪದವಿಯಲ್ಲಿ ಪಡೆದ ಅಂಕಗಳಿಗೆ ಶೇ.30 Weightage ನೀಡಲಾಗುತ್ತದೆ.
ಪ್ರೌಢ ಶಾಲೆ ಮತ್ತು ದೈಹಿಕ ಶಿಕ್ಷಣ ಹುದ್ದೆಗಳ Weightage
CET, TET, PUC, ಪದವಿ ಮತ್ತು ಶಿಕ್ಷಕರ ತರಬೇತಿ ಕೋರ್ಸ್‌ನಲ್ಲಿ ಪಡೆದ ಶೇಕಡಾವಾರು ಅಂಕಗಳಿಗೆ ಮೇಲಿನ ನಿಗದಿತ Weightage ಅನ್ವಯಿಸಿ ಅಂತಿಮ ಮೆರಿಟ್ ಶೇಕಡಾವಾರು ಲೆಕ್ಕ ಹಾಕಲಾಗುತ್ತದೆ. ನಂತರ ವಿಷಯವಾರು, ಮಾಧ್ಯಮವಾರು ಮತ್ತು ಮೀಸಲಾತಿ ವರ್ಗವಾರು ಪ್ರತ್ಯೇಕ ಅರ್ಹತಾ ಪಟ್ಟಿಗಳನ್ನು ತಯಾರಿಸಲಾಗುತ್ತದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ
ಸ್ಪರ್ಧಾತ್ಮಕ ಪರೀಕ್ಷೆ
ಪ್ರತಿ ಶಿಕ್ಷಕರ ವೃಂದಕ್ಕೆ ನಿಗದಿಪಡಿಸಿದ ಪಠ್ಯಕ್ರಮದಂತೆ CET ನಡೆಸಲಾಗುತ್ತದೆ. ಪರೀಕ್ಷೆಯನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಸಲು ಕರಡು ನಿಯಮದಲ್ಲಿ ತಿಳಿಸಲಾಗಿದೆ.
Weightage ಆಧಾರಿತ ಮೆರಿಟ್ ಪಟ್ಟಿ
CET, TET, ವಿದ್ಯಾರ್ಹತೆ ಮತ್ತು ಶಿಕ್ಷಕರ ತರಬೇತಿ ಕೋರ್ಸ್‌ನ ಅಂಕಗಳಿಗೆ ನಿಗದಿತ Weightage ನೀಡಿ ವಿಷಯವಾರು, ಮಾಧ್ಯಮವಾರು ಮತ್ತು ವರ್ಗವಾರು ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.
ದಾಖಲೆಗಳ ಪರಿಶೀಲನೆ
ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಮೊದಲು ಅಧಿಸೂಚಿತ ಹುದ್ದೆಗಳ ಸಂಖ್ಯೆಯ ಎರಡರಷ್ಟು ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ.
ತಾತ್ಕಾಲಿಕ ಆಯ್ಕೆ ಪಟ್ಟಿ
ದಾಖಲೆ ಪರಿಶೀಲನೆಯ ನಂತರ ಅಧಿಸೂಚಿತ ಖಾಲಿ ಹುದ್ದೆಗಳ ಸಂಖ್ಯೆಗೆ ಸಮಾನವಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
ಆಕ್ಷೇಪಣೆಗಳ ಪರಿಶೀಲನೆ
ತಾತ್ಕಾಲಿಕ ಪಟ್ಟಿಗೆ ಸ್ವೀಕರಿಸುವ ಆಕ್ಷೇಪಣೆಗಳನ್ನು ಆಯ್ಕೆ ಪ್ರಾಧಿಕಾರವು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳುತ್ತದೆ.
ಅಂತಿಮ ಆಯ್ಕೆ ಪಟ್ಟಿ
ಆಕ್ಷೇಪಣೆಗಳ ಪರಿಶೀಲನೆಯ ನಂತರ ಖಾಲಿ ಹುದ್ದೆಗಳ ಸಂಖ್ಯೆಗೆ ಸಮಾನವಾದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ನೀಡಿರುವ ಸ್ಥಳದ ಆದ್ಯತೆಗಳನ್ನು ಸಾಧ್ಯವಾದ ಮಟ್ಟಿಗೆ ಪರಿಗಣಿಸಲಾಗುತ್ತದೆ.
ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿ
ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಯು ನಿಗದಿತ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ, ಅದೇ ವಿಷಯ, ವರ್ಗ, ಲಂಬ ಮೀಸಲಾತಿ ಮತ್ತು ಸಮತಳ ಮೀಸಲಾತಿಗೆ ಸೇರಿದ ಅಭ್ಯರ್ಥಿಯನ್ನು ಹೆಚ್ಚುವರಿ ಪಟ್ಟಿಯಿಂದ ಮೆರಿಟ್ ಕ್ರಮದಲ್ಲಿ ನೇಮಕ ಮಾಡಬಹುದು.
ಹೆಚ್ಚುವರಿ ಪಟ್ಟಿಯ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಅಂತಿಮ ಆಯ್ಕೆ ಪಟ್ಟಿಯ ಅಭ್ಯರ್ಥಿಗಳ ಶೇ.10ಕ್ಕಿಂತ ಹೆಚ್ಚಿರಬಾರದು.
⏳ ಪಟ್ಟಿಯ ಮಾನ್ಯತೆ — ಪ್ರಕಟಣೆಯಿಂದ 6 ತಿಂಗಳುಮಹಿಳಾ ಮತ್ತು ಇತರೆ ಮೀಸಲಾತಿ
ನೇರ ನೇಮಕಾತಿಗೆ ಚಾಲ್ತಿಯಲ್ಲಿರುವ ಕರ್ನಾಟಕ ಸರ್ಕಾರದ ಮೀಸಲಾತಿ ನೀತಿಯಂತೆ ಲಂಬ ಮೀಸಲಾತಿ ಮತ್ತು ಸಮತಳ ಮೀಸಲಾತಿ ನಿಯಮಗಳು ಅನ್ವಯವಾಗುತ್ತವೆ. ಮಹಿಳೆಯರು, ಅಂಗವಿಕಲರು ಹಾಗೂ ಇತರೆ ಅರ್ಹ ವರ್ಗಗಳಿಗೆ ಸರ್ಕಾರದ ಪ್ರಚಲಿತ ನಿಯಮಗಳಂತೆ ಮೀಸಲಾತಿ ನೀಡಲಾಗುತ್ತದೆ.
ಅರ್ಜಿ ಸ್ಥಿತಿ, ಪ್ರಮುಖ ದಿನಾಂಕಗಳು ಮತ್ತು ಅಧಿಕೃತ ಲಿಂಕ್ಗಳು
ಪ್ರಸ್ತುತ ಲಭ್ಯವಿರುವುದು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಕರಡು ವಿಶೇಷ ನಿಯಮಗಳ ಅಧಿಸೂಚನೆ ಮಾತ್ರ. ಆನ್‌ಲೈನ್ ಅರ್ಜಿ, ಕೊನೆಯ ದಿನಾಂಕ ಮತ್ತು ಪರೀಕ್ಷಾ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.
ಪ್ರಸ್ತುತ ಅಧಿಕೃತ ಸ್ಥಿತಿ
ಕರಡು ವಿಶೇಷ ನೇಮಕಾತಿ ನಿಯಮಗಳು ಪ್ರಕಟ
ಕರ್ನಾಟಕ ಸರ್ಕಾರವು 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕರಡು ವಿಶೇಷ ನಿಯಮಗಳನ್ನು 14 ಜುಲೈ 2026ರಂದು ಪ್ರಕಟಿಸಿದೆ. ಇದು ಅಂತಿಮ ನೇಮಕಾತಿ ಜಾಹೀರಾತು ಅಥವಾ ಆನ್‌ಲೈನ್ ಅರ್ಜಿ ಅಧಿಸೂಚನೆಯಲ್ಲ.
ಪ್ರಮುಖ ದಿನಾಂಕಗಳು
ಕರಡು ನಿಯಮಗಳಿಗೆ ಸಂಬಂಧಿಸಿದ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 15 ದಿನಗಳ ಅವಧಿ ಮುಗಿಯುವ ಮೊದಲು ಸರ್ಕಾರಕ್ಕೆ ಸಲ್ಲಿಸಬಹುದು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,
6ನೇ ಮಹಡಿ, ಬಹುಮಹಡಿಗಳ ಕಟ್ಟಡ,
ಡಾ. ಬಿ.ಆರ್. ಅಂಬೇಡ್ಕರ್ ವೀದಿ,
ಬೆಂಗಳೂರು – 560 001.
ಪ್ರಮುಖ ಅಧಿಕೃತ ಲಿಂಕ್ಗಳು
ಅರ್ಜಿ ಲಿಂಕ್ ಪ್ರಕಟವಾದ ನಂತರ ಲೇಖನ ಅಪ್ಡೇಟ್ ಮಾಡಲಾಗುತ್ತದೆ
ಆನ್‌ಲೈನ್ ಅರ್ಜಿ ದಿನಾಂಕ, ಅರ್ಜಿ ಕೊನೆಯ ದಿನಾಂಕ, ಅರ್ಜಿ ಶುಲ್ಕ, ಪರೀಕ್ಷಾ ವೇಳಾಪಟ್ಟಿ ಮತ್ತು ಅಧಿಕೃತ ಅರ್ಜಿ ಲಿಂಕ್ ಪ್ರಕಟವಾದ ತಕ್ಷಣ ಈ ಪುಟದಲ್ಲಿ ಹೊಸ ಮಾಹಿತಿ ಸೇರಿಸಲಾಗುತ್ತದೆ.

