ಕರ್ನಾಟಕ ಅತಿಥಿ ಉಪನ್ಯಾಸಕರ ನೇಮಕಾತಿ 2026–27 – ಆನ್‌ಲೈನ್ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು 2026–27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸಂಸ್ಕೃತ ಕಾಲೇಜುಗಳು ಹಾಗೂ ಚಿತ್ರಕಲಾ ಕಾಲೇಜುಗಳಲ್ಲಿ ಲಭ್ಯವಿರುವ ವಿಷಯವಾರು ಹೆಚ್ಚುವರಿ ಬೋಧನಾ ಕಾರ್ಯಭಾರವನ್ನು ನಿರ್ವಹಿಸಲು ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಸ್ನಾತಕೋತ್ತರ ಪದವಿ, NET/SLET/KSET, M.Phil ಅಥವಾ Ph.D. ಸೇರಿದಂತೆ ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು 11 ಜುಲೈ 2026ರಿಂದ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಥವಾ ಅರ್ಜಿಯನ್ನು ತಿದ್ದುಪಡಿ ಮಾಡಲು 20 ಜುಲೈ 2026 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಆಯ್ಕೆಯನ್ನು ರಾಜ್ಯಮಟ್ಟದ ಮೆರಿಟ್ ಪಟ್ಟಿ, ವಿಷಯವಾರು ತಾತ್ಕಾಲಿಕ ಮೆರಿಟ್ ಪಟ್ಟಿ, ಆನ್‌ಲೈನ್ ಕೌನ್ಸೆಲಿಂಗ್ ಹಾಗೂ ಕಾಲೇಜು ಹಂಚಿಕೆ ಮೂಲಕ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ಮೆರಿಟ್ ಅಂಕಗಳ ವಿಧಾನ, ಸೇವಾ ಅನುಭವ, ಅಗತ್ಯ ದಾಖಲೆಗಳು, ಕಾರ್ಯಭಾರ ಮತ್ತು ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಎಚ್ಚರಿಕೆಯಿಂದ ಪರಿಶೀಲಿಸಬೇಕು.
Karnataka Guest Faculty Recruitment 2026–27 – Online Application
The Department of Collegiate Education, Karnataka has invited online applications for the selection of Guest Faculty for the 2026–27 academic year. Eligible candidates may apply for temporary teaching assignments in Government First Grade Colleges, Sanskrit Colleges and Fine Arts Colleges across Karnataka. The online application process begins on 11 July 2026, and the last date to submit or edit the application is 20 July 2026. Candidates can check the educational qualification, merit calculation, guest faculty experience, provisional merit list, online counselling schedule, college allotment process, required documents and official application links on this page.
Karnataka Guest Faculty Recruitment 2026–27 – ತ್ವರಿತ ಅವಲೋಕನ
ಅತಿಥಿ ಉಪನ್ಯಾಸಕರ ಶೈಕ್ಷಣಿಕ ಅರ್ಹತೆ
ಅತಿಥಿ ಉಪನ್ಯಾಸಕರ ಆಯ್ಕೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ UGC 2018ರ ಮಾರ್ಗಸೂಚಿಗಳ ಪ್ರಕಾರ ನಿಗದಿಪಡಿಸಿರುವ ಅರ್ಹತೆಗಳನ್ನು ಹೊಂದಿರಬೇಕು.
ಸಾಮಾನ್ಯ ಅಭ್ಯರ್ಥಿಗಳ ಅರ್ಹತೆ
ಅಭ್ಯರ್ಥಿಯು ಸಂಬಂಧಿತ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು.
ಮೀಸಲಾತಿ ವರ್ಗದ ಅಭ್ಯರ್ಥಿಗಳು
SC, ST, OBC ನಾನ್-ಕ್ರೀಮಿಲೇಯರ್ ಮತ್ತು ವಿಶೇಷ ಚೇತನ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು.
UGC ನಿಗದಿತ ಅರ್ಹತೆ
ಅಭ್ಯರ್ಥಿಯು NET, SLET, KSET ಅಥವಾ UGC ನಿಯಮಾನುಸಾರ Ph.D. ವಿದ್ಯಾರ್ಹತೆಗಳಲ್ಲಿ ಅನ್ವಯಿಸುವ ಅರ್ಹತೆಯನ್ನು ಹೊಂದಿರಬೇಕು.
ಸ್ನಾತಕೋತ್ತರ ಅಂಕಗಳ ಮೌಲ್ಯಮಾಪನ
ಎರಡು ವರ್ಷದ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಒಟ್ಟು ಶೇಕಡಾವಾರು ಅಂಕಗಳ ಶೇ.25ರಷ್ಟು ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಲಾಗುತ್ತದೆ. ಇದಕ್ಕೆ ಗರಿಷ್ಠ 25 ಅಂಕಗಳು ಲಭ್ಯವಿವೆ.
ಹೆಚ್ಚುವರಿ ವಿದ್ಯಾರ್ಹತೆಗೆ ಮೆರಿಟ್ ಅಂಕಗಳು
ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ
ಕರ್ನಾಟಕ ಅತಿಥಿ ಉಪನ್ಯಾಸಕರ ಆಯ್ಕೆಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಉನ್ನತ ವಿದ್ಯಾರ್ಹತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಸೇವಾನುಭವ ಮತ್ತು ಆನ್‌ಲೈನ್ ಕೌನ್ಸೆಲಿಂಗ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಅಂಕಗಳು, ಉನ್ನತ ವಿದ್ಯಾರ್ಹತೆ, ಸೇವಾನುಭವ ಮತ್ತು ಅಗತ್ಯ ದಾಖಲೆಗಳ ಮಾಹಿತಿಯನ್ನು EMIS ಪೋರ್ಟಲ್‌ನಲ್ಲಿ ಸರಿಯಾಗಿ ನಮೂದಿಸಬೇಕು.
ಮೆರಿಟ್ ಅಂಕಗಳ ಲೆಕ್ಕಾಚಾರ
ಸ್ನಾತಕೋತ್ತರ ಪದವಿಯ ಅಂಕಗಳು, Ph.D., NET/SLET/KSET, M.Phil. ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಸೇವಾನುಭವಕ್ಕೆ ನಿಗದಿತ ಅಂಕಗಳನ್ನು ನೀಡಲಾಗುತ್ತದೆ.
ರಾಜ್ಯಮಟ್ಟದ ಮೆರಿಟ್ ಪಟ್ಟಿ
ಅಭ್ಯರ್ಥಿಗಳು ಸಲ್ಲಿಸಿರುವ ಅರ್ಹತೆ ಮತ್ತು ಸೇವಾ ವಿವರಗಳನ್ನು ಆಧರಿಸಿ ವಿಷಯವಾರು ರಾಜ್ಯಮಟ್ಟದ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ತಾತ್ಕಾಲಿಕ ಮೆರಿಟ್ ಪಟ್ಟಿ
ಕಾಲೇಜುಗಳಲ್ಲಿ ಲಭ್ಯವಿರುವ ವಿಷಯವಾರು ಕಾರ್ಯಭಾರಕ್ಕೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಅರ್ಜಿ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.
ಆನ್‌ಲೈನ್ ಕೌನ್ಸೆಲಿಂಗ್
ಮೆರಿಟ್ ಕ್ರಮಾಂಕ ಮತ್ತು ಲಭ್ಯವಿರುವ ಕಾರ್ಯಭಾರದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆನ್‌ಲೈನ್ ಕೌನ್ಸೆಲಿಂಗ್‌ಗೆ ಆಹ್ವಾನಿಸಲಾಗುತ್ತದೆ. ಅಭ್ಯರ್ಥಿಗಳು ಲಭ್ಯವಿರುವ ಕಾಲೇಜುಗಳಲ್ಲಿ ತಮ್ಮ ಆಯ್ಕೆಯನ್ನು ನಮೂದಿಸಬೇಕು.
ಕಾಲೇಜು ಹಂಚಿಕೆ ಮತ್ತು ದಾಖಲೆ ಪರಿಶೀಲನೆ
ಮೆರಿಟ್, ಕೌನ್ಸೆಲಿಂಗ್ ಆಯ್ಕೆ ಮತ್ತು ಕಾರ್ಯಭಾರದ ಆಧಾರದ ಮೇಲೆ ಕಾಲೇಜು ಹಂಚಿಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಆಯ್ಕೆಯಾದವರು ನಿಗದಿತ ಸಮಯದಲ್ಲಿ ಮೂಲ ದಾಖಲೆಗಳೊಂದಿಗೆ ಸಂಬಂಧಪಟ್ಟ ಕಾಲೇಜಿಗೆ ಹಾಜರಾಗಬೇಕು.
ಮೆರಿಟ್ ಅಂಕಗಳ ವಿಂಗಡಣೆ
ಒಟ್ಟು 100 ಅಂಕಗಳುಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ
ಕಾಲೇಜು ಶಿಕ್ಷಣ ಇಲಾಖೆಯ EMIS Karnataka ಅಧಿಕೃತ ಆನ್‌ಲೈನ್ ಅರ್ಜಿ ಪೋರ್ಟಲ್‌ಗೆ ಭೇಟಿ ನೀಡಿ.
ಹೊಸ ಅಭ್ಯರ್ಥಿಗಳು ನೋಂದಣಿ ಮಾಡಿ ಅರ್ಜಿ ಸಲ್ಲಿಸಬೇಕು. ಹಿಂದಿನ ವರ್ಷದ ಅಭ್ಯರ್ಥಿಗಳು Guest Faculty ID ಮತ್ತು OTP ಬಳಸಿ ವಿವರಗಳನ್ನು Update ಮಾಡಬಹುದು.
ವೈಯಕ್ತಿಕ ಮಾಹಿತಿ, ಸ್ನಾತಕೋತ್ತರ ಅಂಕಗಳು, NET/SLET/KSET, Ph.D., M.Phil. ಮತ್ತು ಸೇವಾನುಭವದ ವಿವರಗಳನ್ನು ಸರಿಯಾಗಿ ನಮೂದಿಸಿ.
ಅಗತ್ಯ ಪ್ರಮಾಣಪತ್ರಗಳನ್ನು Upload ಮಾಡಿ, ಅರ್ಜಿಯನ್ನು ಪರಿಶೀಲಿಸಿ 20 ಜುಲೈ 2026ರೊಳಗೆ Submit ಮಾಡಿ.
ಸಲ್ಲಿಸಿದ ಅರ್ಜಿಯ ಪ್ರತಿಯನ್ನು Download ಮಾಡಿಕೊಂಡು ಮುಂದಿನ ಕೌನ್ಸೆಲಿಂಗ್ ಮತ್ತು ದಾಖಲೆ ಪರಿಶೀಲನೆಗಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.

